ಡಾ. ಅಗ್ನಿಕಾ ಅಜೈಕುಮಾರ್ ಅವರ ನೃತ್ಯ ಪಯಣ

ಜುಲೈ 27ರಂದು ಶಿವಮೊಗ್ಗ, ಕುವೆಂಪು ರಂಗಮಂದಿರದಲ್ಲಿ ನಾಟ್ಯ ಸಮರ್ಪಣೆ

ಶಿವಮೊಗ್ಗ: ವಿದುಷಿ ಡಾ. ಅಗ್ನಿಕ ಅಜಯ್‌ಕುಮಾರ್‌ರಿಂದ ನೃತ್ಯಪ್ರದರ್ಶನ ಶಿವಮೊಗ್ಗ:- ನಾಟ್ಯ ಸಮರ್ಪಣೆ ಇದೊಂದು ವಿಶೇಷ ನೃತ್ಯ ಕಾರ್ಯಕಾರ್ಯಕ್ರಮ.
ಜುಲೈ 27ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ವಿದುಷಿ ಡಾ. ಅಗ್ನಿಕ ಅಜಯ್‌ಕುಮಾರ್ ಅಗ್ನಿಕಾಳ ನೃತ್ಯ ಪ್ರದರ್ಶಿಸಲಿದ್ದಾರೆ. ಅಗ್ನಿಕಾಳ ನೃತ್ಯವು ಕೇವಲ ಒಂದು ಪ್ರದರ್ಶನವಲ್ಲ, ಅದು ಸಜೀವ ಉಲ್ಲಾಸದ ದೈವಿಕರೂ. ಅವಲ ವ್ಯಕ್ತಿತ್ವ ಮತ್ತು ಸ್ವಭಾವದ ಪೂಜ್ಯ ಲಯಬದ್ಧ ಪ್ರದರ್ಶನವಾಗಿದೆ. ಈ ನೃತ್ಯ ಸಮರ್ಪಣೆಯಲ್ಲಿ ಅರ್ಧನಾರೇಶ್ವರನ ಅನನ್ಯ ಪರಿಕಲ್ಪನೆಯನ್ನು ವೀಕ್ಷಿಸಬಹುದು.

ಡಾ. ಅಗ್ನಿಕ ಅಜಯ್‌ಕುಮಾರ್‌

ಪರಿಚಯ:
ನೃತ್ಯ ಸಮರ್ಪಿಸುತ್ತಿರುವ ಡಾ. ಅಗ್ನಿಕ ಅಜಯ್‌ಕುಮಾರ್ ವೈದ್ಯಕೀಯ ಶಿಕ್ಷಣ ಪಡೆಯುತ್ತಲೇ ಭರತನಾಟ್ಯದಲ್ಲಿ ಸಾಧನೆ ಮಾಡಿದವರು.
ವಿದ್ವಾನ್ ಶ್ರೀಧರ್ ಜೈನ್‌ರವರ ಶಿಷ್ಯೆಯಾಗಿರುವ ವಿದುಷಿ ಡಾ. ಅಗ್ನಿಕ ಅಜಯ್‌ಕುಮಾರ್ ಮೂರು ವರ್ಷದವರಿದ್ದಾಗಲೇ ಭರತನಾಟ್ಯ ಕಲಿಯಲು ಆರಂಭಿಸಿದವರು.
ಮೈಸೂರಿನ ಶ್ರೀ ನಿಮಿಷಾಂಬ ಸ್ಕೂಲ್ ಆಪ್ ಡ್ಯಾನ್ಸ್ ಮೂಲಕ ತಮ್ಮ ಆರನೇ ವಯಸ್ಸಿನಲ್ಲೇ ಏಕವ್ಯಕ್ತಿ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದರು. ಕೇವಲ 9ನೇ ವಯಸ್ಸಿನಲ್ಲಿ (2010)ರಲ್ಲಿ ರಂಗ ಪ್ರವೇಶ ಮಾಡಿದ ನೃತ್ಯಪಟು. ನಂತರ ಇವರು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದು, 2018ರಲ್ಲಿ ಸ್ಪೇನ್‌ನಲ್ಲಿ ನಡೆದ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದು ಇವರ ನೃತ್ಯ ಪಯಣದ ವಿಶೇಷ ಸಾಧನೆ.
ಡಾ. ಅಗ್ನಿಕ ರವರು ಎಂಬಿಬಿಎಸ್ ಮತ್ತು ಇನ್‌ಟೆನ್‌ಶಿಪ್ ಮುಗಿದ ಜೊತೆಯಲ್ಲೇ ಭರತನಾಟ್ಯದಲ್ಲಿ ಸ್ನಾತಕೋತ್ತರ ವಿದ್ವತ್ ಪರೀಕ್ಷೆ ಸಹ ಪೂರ್ಣಗೊಳಿಸಿದ ಸವಿನೆನಪಿಗಾಗಿ ನಾಟ್ಯ ಸಮರ್ಪಣೆ ನೃತ್ಯ ಪ್ರದರ್ಶನವನ್ನು ಶಿವಮೊಗ್ಗ ನಗರದಲ್ಲಿ ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಮಕ್ಕಳ ವೈದ್ಯರು ಮತ್ತು ಭರತನಾಟ್ಯ ಕಲಾವಿದರಾದ ವಿದುಷಿ ಡಾ. ಸುನೀಲಾ ಹೆಚ್. ನಾಯಕ್ ಹಾಗೂ ವಿದುಷಿ ಡಾ. ಕೆ.ಎಸ್. ಪವಿತ್ರ ಭಾಗವಹಿಸುವರು. ಡಾ. ಭುವನೇಶ್ವರಿ ಯವರ ನಿರೂಪಣೆ ಈ ಕಾರ್ಯಕ್ರಮಕ್ಕಿರುತ್ತದೆ.

Leave a Reply

Your email address will not be published. Required fields are marked *