
ಮೈಸೂರು, 17 ಆಗಸ್ಟ್ 2024: ಎಚ್.ಡಿ.ಎಫ್.ಸಿ. ಲೈಫ್ ವಿಮಾ ಸಂಸ್ಥೆಯು ಇದೀಗ ಮೈಸೂರಿನ ಟಿ.ಕೆ.ಲೇಔಟ್ ನಲ್ಲಿ ಹೊಸದಾಗಿ ಶಾಖೆ ಆರಂಭಿಸಿದ್ದು, ಗ್ರಾಹಕರಿಗೆ ಸರಳ ವಿಮಾ ಕಂತುಗಳಲ್ಲಿ ಆಕರ್ಷಕ ಕೊಡುಗೆಗಳನ್ನು ನೀಡುವುದರ ಜೊತೆಗೆ ನಿರುದ್ಯೋಗಿಗಳಿಗೆ ಹೊಸದಾಗಿ ಉದ್ಯೋಗ ನೀಡುವ ಸಂಕಲ್ಪಕ್ಕೂ ಚಾಲನೆ ನೀಡಲಾಯಿತು.
ಕಳೆದ ಶನಿವಾರ ಶಾಖಾ ಕಚೇರಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎಚ್.ಡಿ.ಎಫ್.ಸಿ. ಲೈಫ್ ಏಜೆನ್ಸಿ ಬ್ಯುಸಿನೆಸ್ ಪಾರ್ಟ್ನರ್(ಎಬಿಪಿ) ಮುಖ್ಯಸ್ಥ ಪ್ರಶಾಂತ್ ಪೈದಸೆಟ್ಟಿ, ರಾಜ್ಯ ಉಪಾಧ್ಯಕ್ಷ ಅಭಿಷೇಕ್ ಅವಿನಾಶ್ ಕಕ್ಕರ್, ಹಿರಿಯ ಉಪಾಧ್ಯಕ್ಷ ಲಿಂಗರಾಜು ವಿ. ಹಿರೇಮಠ, ಪ್ರಾದೇಶಿಕ ಮುಖ್ಯಸ್ಥ ಮಲ್ಲೇಶ್ ಪಾಲ್ಗೊಂಡು ಕಂಪನಿಯ ಧ್ಯೇಯೋದ್ದೇಶಗಳು, ಕೊಡುಗೆಗಳು, ಮುನ್ನೋಟ, ಪಾಲಿಸಿಗಳ ವಿವರ ಮತ್ತಿತರ ವಿಚಾರಗಳನ್ನು ಹಂಚಿಕೊಂಡರು.

ಮೈಸೂರಿನ ಪ್ರಮುಖ್ಯ ಉದ್ಯಮಿಗಳಲ್ಲಿ ಒಬ್ಬರಾದ ಹೋಟೆಲ್ ಸಿದ್ದಾರ್ಥ್ ಮಾಲೀಕರೂ ಆದ ಪಿ.ವಿ.ಗಿರಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ನೂತನ ಯೋಜನೆಗೆ ಶುಭ ಹಾರೈಸಿದರು. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಬಗೆ, ಗ್ರಾಹಕರೊಂದಿಗೆ ವ್ಯವಹರಿಸುವ ವಿಧಾನ, ಗ್ರಾಹಕ ಪಾವತಿಸುವ ಹಣಕ್ಕೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ ಅವರಿಗೆ ಮರು ಪಾವತಿಯಾಗುವ ಹಣದ ದ್ವಿಗುಣಕ್ಕೂ ಗಮನ ನೀಡುವಂತೆ ಹಿತವಚನ ನುಡಿದರು.
ಮೈಸೂರು ವಿವಿ ಇಎಂಎಂಆರ್ಸಿ ನಿರ್ದೇಶಕಿ ಪ್ರೊ.ಎಂ.ಎಸ್.ಸಪ್ನ ಮಾತನಾಡಿ, ಎಚ್.ಡಿ.ಎಫ್.ಸಿ. ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಮೈಸೂರು ಶಾಖೆ ಮುಖ್ಯಸ್ಥರಾಗಿ ನೂತನ ಜವಾಬ್ದಾರಿ ಹೊತ್ತುಕೊಂಡಿರುವ ಹಬೀಬುಲ್ಲಾ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ಮೈಸೂರಿನ ಹಿರಿಯ ಪತ್ರಕರ್ತರಾದ ಟಿ. ಗುರುರಾಜ್ ಮಾತನಾಡಿ, ಎಚ್.ಡಿ.ಎಫ್.ಸಿ. ಲೈಫ್ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಾ, ಹೊಸಬರವನ್ನು ಬೆಳೆಸುವಂತಾಗಲಿ. ಹಬೀಬುಲ್ಲಾ ಅವರು ಮತ್ತಷ್ಟು ಎತ್ತರಕ್ಕೆ ತಲುಪುವಂತಾಗಲಿ ಎಂದರು.
ಎಚ್.ಡಿ.ಎಫ್.ಸಿ. ಲೈಫ್ ಮೈಸೂರು ಶಾಖಾ ಮುಖ್ಯಸ್ಥ ಹಬೀಬುಲ್ಲಾ, ಹಿತೈಷಿ ಜೀಶಾನ್ ಮತ್ತಿತರರು ಹಾಜರಿದ್ದರು.
ಸಾಧಕರಿಗೆ ಸನ್ಮಾನ

ಎಚ್.ಡಿ.ಎಫ್.ಸಿ. ಲೈಫ್ ಶಾಖಾ ಆರಂಭೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಹೋಟೆಲ್ ಸಿದ್ದಾರ್ಥ್ ಮಾಲೀಕರಾದ ಪಿ.ವಿ.ಗಿರಿ, ಹಿರಿಯ ಪತ್ರಕರ್ತ ಟಿ.ಗುರುರಾಜ್, ರಿಂಗ್ ರಸ್ತೆಯಲ್ಲಿರುವ ಫ್ಯೂಚರ್ ಫೌಂಡೇಷನ್ ಸಂಸ್ಥೆಯ ಕಾರ್ಯದರ್ಶಿ ಗೌಹರ್ ಸುಲ್ತಾನ್, ಸಾಫ್ಟ್ ಸ್ಕಿಲ್ ಟ್ರೈನರ್ ಮೊಹಮ್ಮದ್ ಜೀಶಾನ್, ನೌಶೀನ್ ಫಾತೀಮಾ, ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥರಾದ ಜಯರಾಮ್, ರಿಯಲ್ ಎಸ್ಟೇಟ್ ಕ್ಷೇತ್ರದ ನವೀದ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.