
ಮನುಷ್ಯನ ದೇಹಕ್ಕೆ ಬದುಕುವ ಸಲುವಾಗಿ ಆಹಾರ ಅವಶ್ಯಕತೆ ಇರುತ್ತದೆ. ನಾವು ಯಾವಾಗ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತೇವೆ ಅಥವಾ ಅನಾರೋಗ್ಯಕರ ಆಹಾರಗಳನ್ನು ತಿನ್ನಲು ಮುಂದಾಗುತ್ತೇವೆ, ಆ ಸಂದರ್ಭದಲ್ಲಿ ನಾವೇ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಂತೆ ಆಗುತ್ತದೆ.
ಇದಕ್ಕೆ ಉತ್ತಮ ಉದಾಹರಣೆ ಯೆಂದರೆ ನಾವು ರಾತ್ರಿ ಹೊತ್ತು ಊಟ ಮಾಡುವ ಸಂದರ್ಭದಲ್ಲಿ ಮಾಡುವ ಕೆಲವೊಂದು ತಪ್ಪುಗಳು. ಸಮಯಕ್ಕೆ ಸರಿಯಾಗಿ ಬೇಗನೆ ಊಟ ಮಾಡದೆ ಇರುವುದರಿಂದ ಹಿಡಿದು ಇನ್ನೂ ಅನೇಕ ತಪ್ಪುಗಳನ್ನು ನಮಗೆ ಗೊತ್ತಿಲ್ಲದೇ ಮಾಡುತ್ತೇವೆ. ಇದರಿಂದ ಕೊಲೆಸ್ಟ್ರಾಲ್ ಎನ್ನುವ ನೆಪದಲ್ಲಿ ನಮ್ಮ ಹೃದಯಕ್ಕೆ ನಾವೇ ತೊಂದರೆ ತಂದುಕೊಳ್ಳುತ್ತೇವೆ. ಬನ್ನಿ ಈ ಲೇಖನದಲ್ಲಿ ನಾವು ರಾತ್ರಿ ಊಟ ಮಾಡುವ ಸಮಯ ಬಂದಾಗ ಏನೇನು ಮಾಡಬಾರದು ಎಂಬುದನ್ನು ನೋಡೋಣ.
ತಡವಾಗಿ ಊಟ ಮಾಡುವುದು

- ಬಹಳಷ್ಟು ಜನರಿಗೆ ಇದೊಂದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಏನೆಂದರೆ ಅದು ಇದು ಕೆಲಸ ಮಾಡಿಕೊಂಡು ರಾತ್ರಿ ಹೊತ್ತು ಊಟ ತಡವಾಗಿ ಮಾಡುತ್ತಾರೆ ಮತ್ತು ತಕ್ಷಣವೇ ಹೋಗಿ ಮಲಗುತ್ತಾರೆ.
- ಅಂದರೆ ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಊಟ ಮಾಡಿದ ಸಮಯಕ್ಕೂ ಮತ್ತು ಮಲಗಿದ ಸಮಯಕ್ಕೂ ಹೆಚ್ಚು ಅಂತರವಿರು ವುದಿಲ್ಲ.
- ಜರ್ನಲ್ ಸೆಲ್ ಮೆಟಾಬಾಲಿಸಂ ಎಂಬ ಅಧ್ಯಯನದಲ್ಲಿ ನೀಡಿರುವ ವರದಿಯ ಪ್ರಕಾರ ಈ ರೀತಿಯ ಅಭ್ಯಾಸದಿಂದ ಹೊಟ್ಟೆ ಹಸಿವು ಜಾಸ್ತಿಯಾಗುತ್ತದೆ ಮತ್ತು ಲೆಫ್ಟಿನ್ ಎನ್ನುವ ಹಾರ್ಮೋನಿನ ಪ್ರಮಾಣ ಕಡಿಮೆ ಆಗುತ್ತದೆ.
- ಕ್ರಮೇಣವಾಗಿ ಇದು ಸೊಂಟದ ಸುತ್ತಲೂ ಬೊಜ್ಜು ಕಂಡುಬರುವಂತೆ ಮಾಡುತ್ತದೆ ಮತ್ತು ಇದು ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಉಂಟಾಗಲು ಕಾರಣವಾಗುತ್ತದೆ.