ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಅಲ್ತಾಫ್‌ ಖಾನ್‌ ಮೇಲೆ ಕೊಲೆ ಆರೋಪ.

ಮೈಸೂರಿನ ಅಕ್ಮಲ್ ಎಂಬಾತನ ಕೊಲೆ ಕೇಸ್‌ನಲ್ಲಿ (Murder Case) ಬಿ.ಕೆ.ಅಲ್ತಾಫ್‌ ಖಾನ್ A2 ಆರೋಪಿ ಎಂದು ಗುರುತಿಸಲಾಗಿದೆ. ಮಾರ್ಚ್ 9, 2024ರಂದು ಮೈಸೂರಿನ ರಾಜೀವ ನಗರದಲ್ಲಿ ಅಕ್ಮಲ್‌ನ ಭೀಕರ ಹತ್ಯೆ ನಡೆದಿತ್ತು.

Akmal-Murder-case
ಅಕ್ಮಲ್ ಕೊಲೆ ಕೇಸಿನಲ್ಲಿ A2 ಆರೋಪಿಯಾಗಿರುವ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಅಲ್ತಾಫ್ ಖಾನ್

ಮೈಸೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (Karnataka Minority Development Corporation) ನೂತನ ಅಧ್ಯಕ್ಷರಾಗಿರುವ ಬಿ.ಕೆ. ಅಲ್ತಾಫ್ ಖಾನ್ ಅವರ ಮೇಲೆ ಭೀಕರ ಕೊಲೆ ಕೇಸು (Murder Case) ದಾಖಲಾಗಿದ್ದು, ಇದು ಇಡೀ ನಾಡಿಗೆ ಆಘಾತ ತಂದಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಕ್ಮಲ್ ಎಂಬಾತನ ಹತ್ಯೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.

ಮಾರ್ಚ್ 9, 2024ರಂದು, ಮೈಸೂರಿನ ರಾಜೀವ ನಗರದಲ್ಲಿ ಅಕ್ಮಲ್‌ನ ಹತ್ಯೆ ನಡೆದಿದ್ದು, ಈ ಕೃತ್ಯವು ಎಲ್ಲರ ಮನಸ್ಸಿಗೆ ಶೋಕ ತಂದಿದೆ. ಅಕ್ಮಲ್ ಅವರ ಪತ್ನಿ ನಾಜೀಯಾ ನೀಡಿದ ದೂರಿನ ಆಧಾರದಲ್ಲಿ ಬಿ.ಕೆ. ಅಲ್ತಾಫ್‌ ಖಾನ್ ಮತ್ತು ಇತರ ಐವರು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅಕ್ಮಲ್ ಅವರ ಪತ್ನಿ ನಾಜೀಯಾ, ಆ ಕ್ರೂರ ಹತ್ಯೆಯ ಹಿಂದೆ ಬಿ.ಕೆ. ಅಲ್ತಾಫ್‌ ಖಾನ್ ಅವರ ದ್ವೇಷವೇ ಕಾರಣವೆಂದು ಆರೋಪಿಸಿ ದೂರು ನೀಡಿದ್ದಾರೆ. ಹತ್ಯೆಯಾದ ಅಕ್ಮಲ್, ಅಲ್ತಾಫ್‌ ಖಾನ್ ಅವರ ವಿರುದ್ಧ ಫ್ಲೆಕ್ಸ್ ತೆರವುಗೊಳಿಸುವಂತೆ ಮೈಸೂರು ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಅಕ್ಮಲ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಇದೆ.

ಅಕ್ಮಲ್ ಅವರು ವಿಡಿಯೋ ಮೂಲಕ ಅಲ್ತಾಫ್‌ ಖಾನ್ ಮತ್ತು ಇತರರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದರು, ಇದರಿಂದ ಅವರ ನಡುವೆ ದ್ವೇಷ ಹೆಚ್ಚಾಯಿತು.

ಈ ದ್ವೇಷದಿಂದ, ತನ್ನ ಪತಿಯನ್ನು ಕಳೆದುಕೊಂಡ ನಾಜೀಯಾ, ಪತ್ನಿ ಹಾಗು ತಾಯಿ ಎನ್ನುವ ಸ್ಥಿತಿಯಿಂದ ಕಣ್ಣೀರು ಹಾಕುತ್ತಾ, ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.

akmal-family
ಮೃತ ಅಕ್ಮಲ್ ಹೆಂಡತಿ ನಾಝಿಯಾ, ಮಗ ಅಂಜರ್ ಶಾಹ್ ಮತ್ತು ಅಣ್ಣ ಸಿರಾಜ್ ಪಾಶ

ಈ ವಿಚಾರವಾಗಿ ನಾವು ಮನೆಯವರ ಜೊತೆ ಸೊಂದರ್ಶನ ನಡೆಸಿದಾಗ, ಅಕ್ಮಲ್ ಅವರ ಅಣ್ಣ ನಟ ದರ್ಶನ್ ಅವರ ಉದಾಹರಣೆ ಕೊಟ್ಟು ಪೊಲೀಸರು ಬೇಜವಾಬ್ದಾರಿ ವರ್ಥಿಸುತ್ತಿದ್ದಾರೆ ಎಂದು ತಮ್ಮ ಮನಸ್ಸಿನ ನೋವನ್ನು ತೋಡಿಕೊಂಡರು. ದರ್ಶನ್ ರಂತಹ ನಟರಿಗೆ ಒಂದು ನ್ಯಾಯ, ನಮಗೊಂದು ನ್ಯಾಯಾನಾ? ಎಂದು ಸರ್ಕಾರಕ್ಕೆ ಪ್ರಶ್ನೆ ಹಾಕಿದರು. ಗಂಡನನ್ನು ಕಳೆದುಕೊಂಡ ನಾಝಿಯಾ, ತಂದೆಯನ್ನು ಕಳೆದುಕೊಂಡ ಅಂಜರ್ ಶಾಹ್, ತಮ್ಮನನ್ನು ಕಳೆದುಕೊಡಿರೋ ಸಿರಾಜ್ ಪಾಶ, ನಮಗೆ ನ್ಯಾಯ ಬೇಕು, ನ್ಯಾಯಕ್ಕಾಗಿ ನಾವು ನಮ್ಮ ಪ್ರಾಣ ಬೇಕಾದರೂ ಕೊಡುತ್ತೇವೆ ಎಂದು ತಮ್ಮ ಮನಸ್ಸಿನ ನೋವನ್ನು ತೋಡಿಕೊಂಡರು.

ಮೃತ ಅಕ್ಮಲ್ ಕುಟುಂಬಕ್ಕೆ ಅತೀ ಶೀಘ್ರದಲ್ಲಿ ನ್ಯಾಯ ಸಿಗಲಿ ಹಾಗೂ ಅಕ್ಮಲ್ ಕೊಲೆ ಆರೋಪಿಗಳಿಗೆ ಶಿಕ್ಷೆ ಯಾಗಲಿ ಎಂದು #justiceforakmal ಎಂಬ ಅಭಿಯಾನ ಶುರುವಾಗಿದ್ದು, ಸಾರ್ವಜನಿಕರು ಪ್ರೋತ್ಸಾಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *