Dussehra 2023: ದಸರಾ ಅಥವಾ ವಿಜಯದಶಮಿ 2023 ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ..!

ವಿಜಯದಶಮಿ ಎಂದು ಕರೆಯಲಾಗುವ ದಸರಾ ಹಬ್ಬವನ್ನು ಅಕ್ಟೋಬರ್‌ 24 ರಂದು ಮಂಗಳವಾರ ಆಚರಿಸಲಾಗುವುದು. ದಸರಾ ಹಬ್ಬ 2023 ರ ಪೂಜೆಯನ್ನು ಯಾವ ಶುಭ ಮುಹೂರ್ತದಲ್ಲಿ ಮಾಡಬೇಕು..? ದಸರಾ ಹಬ್ಬದ ಪೂಜೆ ವಿಧಿ – ವಿಧಾನಗಳಾವುವು..? ಈ ಬಾರಿ ದಸರಾವನ್ನು ಹೀಗೆ ಆಚರಿಸಿ.

ದಸರಾ ಹಬ್ಬವನ್ನು ಹಿಂದೂಗಳು ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ, ಅಶ್ವಿನ್‌ ಮಾಸದ ಶುಕ್ಲ ಪಕ್ಷದ 10ನೇ ದಿನದಂದು ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್‌ 24 ರಂದು ಮಂಗಳವಾರ ದಸರಾ ಹಬ್ಬವನ್ನು ಆಚರಿಸಲಾಗುವುದು. ದಸರಾ ಹಬ್ಬವನ್ನು ಕೆಟ್ಟದರ ಮೇಲೆ ಒಳಿತಿನ ವಿಜಯದ ಸಂಕೇತವೆಂದು ಆಚರಿಸಲಾಗುತ್ತದೆ. ದಸರಾ ಹಬ್ಬವನ್ನು ವಿಜಯದಶಮಿ ಎಂದೂ ಕರೆಯಲಾಗುತ್ತದೆ. ಹಿಂದೂ ನಂಬಿಕೆಗಳ ಪ್ರಕಾರ, ಈ ದಿನದಂದು ಭಗವಾನ್‌ ರಾಮನು ಲಂಕಾ ರಾಜ ರಾವಣನನ್ನು ಕೊಂದು ಸೀತಾ ಮಾತೆಯನ್ನು ಆತನ ಬಂಧನದಿಂದ ಮುಕ್ತಗೊಳಿಸಿದ ದಿನ. ಈ ಕಾರಣಕ್ಕಾಗಿ ದಸರಾ ದಿನದಂದು ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. 2023 ರ ದಸರಾ ಹಬ್ಬದ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಈ ಲೇಖನ ಓದಿ..

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಅಶ್ವಿನ್ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯು 2023 ರ ಅಕ್ಟೋಬರ್‌ 23 ರಂದು ಸಂಜೆ 5.44 ರಿಂದ ಪ್ರಾರಂಭವಾಗುತ್ತದೆ ಮತ್ತು 2023 ರ ಅಕ್ಟೋಬರ್‌ 24 ರಂದು ಮಧ್ಯಾಹ್ನ 3.14 ರವರೆಗೆ ಇರುತ್ತದೆ. ಹಾಗಾಗಿ ಉದಯತಿಥಿ ಪ್ರಕಾರ ಈ ಬಾರಿ ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 24 ರಂದು ಆಚರಿಸಲಾಗುವುದು.
ರಾವಣ ದಹನದ ಸಮಯ:
ಪಂಚಾಂಗದ ಪ್ರಕಾರ, ರಾವಣ ದಹನದ ಸಮಯವು 2023 ರ ಅಕ್ಟೋಬರ್‌ 24 ರಂದು ಸಂಜೆ 6.35 ರಿಂದ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 8.30 ಕ್ಕೆ ಮುಕ್ತಾಯಗೊಳ್ಳುತ್ತದೆ.
ವಿಜಯ ಮತ್ತು ಮಧ್ಯಾಹ್ನದ ಮುಹೂರ್ತ: 
ಈ ದಿನ ಮಧ್ಯಾಹ್ನ 2:05 ರಿಂದ 2:51 ರವರೆಗೆ ವಿಜಯ ಮುಹೂರ್ತ ಮತ್ತು ಮಧ್ಯಾಹ್ನ 1:20 ರಿಂದ 3:37 ರವರೆಗೆ ಮಧ್ಯಾಹ್ನದ ಮುಹೂರ್ತವಿರುತ್ತದೆ.

​ದಸರಾ 2023 ಶುಭ ಯೋಗ​

ದಸರಾ 2023 ಶುಭ ಯೋಗ
ದಸರಾ ದಿನವಾದ ಅಕ್ಟೋಬರ್‌ 24 ರಂದು, ರವಿ ಯೋಗ ಮತ್ತು ತ್ರಿಗ್ರಾಹಿ ಯೋಗದ ಸಂಯೋಗವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದಂದು ಪೂಜೆ ಮಾಡುವುದರಿಂದ ಹೊಸ ವಸ್ತುಗಳನ್ನು ಖರೀದಿಸುವುದರಿಂದ ಶುಭ ಫಲಗಳು ದೊರೆಯುತ್ತದೆ. ಈ ದಿನ 2 ಶುಭ ಯೋಗಗಳು ರೂಪುಗೊಳ್ಳುತ್ತಿದೆ.
– ರವಿ ಯೋಗ – ಅಕ್ಟೋಬರ್‌ 24 ರಂದು ಮುಂಜಾನೆ 06.27 ರಿಂದ ಮಧ್ಯಾಹ್ನ 03.28 ರವರೆಗೆ.
– ತ್ರಿಗ್ರಾಹಿ ಯೋಗ – ದಸರಾ ದಿನದಂದು ತುಲಾ ರಾಶಿಯಲ್ಲಿ ಮಂಗಳ, ಸೂರ್ಯ ಮತ್ತು ಬುಧ ಇರುತ್ತಾರೆ. ಈ ಮೂರು ಗ್ರಹಗಳ ಸಂಯೋಗವು ತ್ರಿಗ್ರಾಹಿ ಯೋಗವನ್ನು ಉಂಟುಮಾಡುತ್ತದೆ. ಇದೊಂದು ಅಪರೂಪದ ಸಂಯೋಗವಾಗಿದೆ. ಅದರ ಪರಿಣಾಮದಿಂದಾಗಿ ಸಾಧಕನು ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಮತ್ತು ಆರ್ಥಿಕ ಲಾಭವನ್ನು ಪಡೆಯುತ್ತಾನೆ.

– ದಸರಾ ಹಬ್ಬದ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾಗಿ.
– ಸ್ನಾನದ ನಂತರ ನೀವು ಶುದ್ಧವಾದ ಬಟ್ಟೆಯನ್ನು ಧರಿಸಬೇಕು.
– ಗೋಧಿ ಅಥವಾ ಹಣ್ಣಿನಿಂದ ದಸರಾ ವಿಗ್ರಹವನ್ನು ಮಾಡಿ.
– ಈ ದಿನ ನೀವು ಹಸುವಿನ ಸಗಣಿಯಿಂದ 9 ಉಂಡೆಗಳನ್ನು ಮತ್ತು 2 ಬಟ್ಟಲುಗಳನ್ನು ಮಾಡಿ.
– ಇದರ ನಂತರ, ಒಂದು ಪಾತ್ರೆಯಲ್ಲಿ ಒಂದು ನಾಣ್ಯವನ್ನು ಇರಿಸಿ ಮತ್ತು ಇನ್ನೊಂದು ಬಟ್ಟಲಿನಲ್ಲಿ ರೋಲಿ, ಅಕ್ಕಿ ಮತ್ತು ಬಾರ್ಲಿಯನ್ನು ಇರಿಸಿ.
– ವಿಗ್ರಹದ ಮುಂದೆ ಬಾಳೆಹಣ್ಣು, ಬಾರ್ಲಿ ಮತ್ತು ಬೆಲ್ಲವನ್ನು ಅರ್ಪಿಸಿ.
– ಈ ದಿನದಂದು ಬನ್ನಿ ಅಥವಾ ಶಮಿ ವೃಕ್ಷದ ಪೂಜೆಗೂ ಹೆಚ್ಚಿನ ಮಹತ್ವವಿದೆ. ಹಾಗಾಗಿ ಬನ್ನಿ ಮರವನ್ನೂ ಪೂಜಿಸಬೇಕು.
– ದಸರಾ ದಿನದಂದು ಬಡವರಿಗೆ ಮತ್ತು ನಿರ್ಗತಿಕರಿಗೆ ದಾನ ಮತ್ತು ಆಹಾರವನ್ನು ನೀಡಿ.
– ಇದರೊಂದಿಗೆ ರಾವಣ ದಹನದ ನಂತರ ಮನೆಯ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *