‘ಸೋಶಿಯಲ್‌ ಮೀಡಿಯಾವನ್ನು ನಂಬಬೇಡಿ’: ವೈರಲ್‌ ವಿಡಿಯೋ ಬಗ್ಗೆ ವಿನೋದ್‌ ಕಾಂಬ್ಲಿ ಸ್ಪಷ್ಟನೆ!

ಹೊಸದಿಲ್ಲಿ: ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ವಿನೋದ್‌ ಕಾಂಬ್ಳಿ ಅವರ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಇದೀಗ ಸ್ವತಃ ವಿನೋದ್‌ ಕಾಂಬ್ಳಿ ಅವರೇ ಸ್ಪಷ್ಟನೆ ನೀಡಿದ್ದಾರೆ. ತಾವು ಅನಾರೋಗ್ಯದಿಂದ ಅತ್ಯುತ್ತಮವಾಗಿ ಚೇತರಿಸಿಕೊಳ್ಳುತ್ತಿರುವುದಾಗಿ ಕಾಂಬ್ಳಿ ತಮ್ಮ ಸ್ನೇಹಿತರಿಗೆ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ವಿನೋದ್‌ ಕಾಂಬ್ಳಿ ಅವರ ವಿಡಿಯೋ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ವಿಡಿಯೋದಲ್ಲಿ ವಿನೋದ್‌ ಕಾಂಬ್ಳಿ ಅವರ ನಡೆಯಲು ಸಾಧ್ಯವಾಗದೆ ಬೈಕ್‌ ಅನ್ನು ಹಿಡಿದುಕೊಂಡು ಕಷ್ಟಪಡುತ್ತಿದ್ದರು. ನಂತರ ಮುಂದೆ ಬಂದು ನಡೆಯಲು ಪರದಾಡುತ್ತಿದ್ದ ವಿನೋದ್‌ ಕಾಂಬ್ಳಿ ಅವರನ್ನು ಸ್ಥಳೀಯರು ಕೈ ಹಿಡಿದು ಸಹಾಯ ಮಾಡಿದ್ದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದರಿಂದ ಅಭಿಮಾನಿಗಳು ವಿನೋದ್‌ ಕಾಂಬ್ಳಿ ಅವರ ಪರಿಸ್ಥಿತಿಯನ್ನು ನೋಡಿ ಶಾಕ್‌ ಆಗಿದ್ದರು.

ವಿನೋದ್‌ ಕಾಂಬ್ಳಿ ಅವರು ಈ ವಿಡಿಯೋ ಬಗ್ಗೆ ತಮ್ಮ ಸ್ನೇಹಿತರು ಹಾಗೂ ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಅಧಿಕಾರಗಳ ಬಳಿಕ ಹೇಳಿಕೊಂಡಿದ್ದಾರೆ. ಶಾಲಾ ಸಹಪಾಠಿ ರಿಕ್ಕಿ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ನ ಅಂಪೈರ್ ಮಾರ್ಕಸ್‌ ಅವರಿಗೆ ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋ ತುಂಬಾ ಹಳೆಯದು ಎಂದು ಮಾಜಿ ಕ್ರಿಕೆಟಿಗ ತಮ್ಮ ಸ್ನೇಹಿತರ ಬಳಿ ಖಚಿತಪಡಿಸಿದ್ದಾರೆ.

“ನಾನು ತುಂಬಾ ಚೆನ್ನಾಗಿದ್ದೇನೆ, ಸೋಶಿಯಲ್‌ ಮೀಡಿಯಾವನ್ನು ನಂಬಬೇಡಿ,” ಎಂದು ವಿನೋದ್‌ ಕಾಂಬ್ಳಿ ಅವರು ತಮ್ಮ ಸ್ನೇಹಿತ ಮಾರ್ಕಸ್‌ಗೆ ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *