ಕ್ಯಾನ್ಸರ್ ರೋಗಿಗಳಿಗೆ ಪೌಷ್ಠಿಕ ಆಹಾರ ಪೌಡರ್ ವಿತರಣಾ ಕಾರ್ಯಕ್ರಮ

ಶಿವಮೊಗ್ಗ, 18 ಡಿಸೆಂಬರ್ 2024: ಇಂಡಿಯನ್ ಕ್ಯಾನ್ಸರ್ ಸೊಸೈಟಿ (ರಿ.) ಬೆಂಗಳೂರು ಮತ್ತು ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಶಿವಮೊಗ್ಗ ಇವರುಗಳ ಜಂಟಿ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 2024ರ ಡಿಸೆಂಬರ್ 18ರ ಬುಧವಾರ, 4ನೇ ಬಾರಿಗೆ ಆಯೋಜಿತ ಈ ವಿಶೇಷ ಕಾರ್ಯಕ್ರಮದಲ್ಲಿ, ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 150ಕ್ಕೂ ಹೆಚ್ಚಿನ ಕ್ಯಾನ್ಸರ್ ರೋಗಿಗಳಿಗೆ 3 ತಿಂಗಳುಗಳ ಕಾಲ ಉಪಯೋಗಿಸಬಹುದಾದ ಪೌಷ್ಠಿಕ (ಪ್ರೋಟೀನ್) ಪೌಡರ್ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಪೌಡರ್‌ ಕಿಟ್‌ಗಳ ಮೌಲ್ಯ ಸುಮಾರು ₹4,000 ಆಗಿದ್ದು, ರೋಗಿಗಳ ಆರೋಗ್ಯವನ್ನು ಬಲಪಡಿಸಲು ಮತ್ತು ಅವರ ಚಿಕಿತ್ಸೆ ಪ್ರಕ್ರಿಯೆಗೆ ಸಹಾಯ ಮಾಡಲು ಈ ಪ್ರಯತ್ನ ಮಾಡಲಾಗಿದೆ.

Malnad-Cancer-Hospital
ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಗಳಾದ ಅನಿಲ್ ಸಿ.ಪಿ ಪ್ರೊಟೀನ್ ಕಿಟ್ ವಿತರಿಸುತ್ತಿರುವುದು

ಕಾರ್ಯಕ್ರಮದಲ್ಲಿ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಗಳಾದ ಅನಿಲ್ ಸಿ.ಪಿ., ವಿಕಿರಣ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಅಮಿತ್ ರಾಜ್ ಹಾಗೂ ಆಸ್ಪತ್ರೆಯ ಸಿಬ್ಬಂದಿವರ್ಗ ಭಾಗವಹಿಸಿದ್ದರು. ಡಾ. ಅಮಿತ್ ರಾಜ್ ಅವರು ಕ್ಯಾನ್ಸರ್ ರೋಗಿಗಳಿಗೆ ಪೌಷ್ಠಿಕ ಆಹಾರದ ಮಹತ್ವವನ್ನು ವಿವರಿಸಿದರು ಮತ್ತು ಇದು ರೋಗಿಗಳಿಗೆ ಪುನರ್ವಸತಿ ಪ್ರಕ್ರಿಯೆಯಲ್ಲಿ ಅಗತ್ಯವಾದ ಬಲವನ್ನು ನೀಡುತ್ತದೆ ಎಂಬುದನ್ನು ಹೀಗೂ ಹೇಳಿದರು.

Malnad-Cancer-Hospital
ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ – ವಿಕಿರಣ ಚಿಕಿತ್ಸಾ ತಜ್ಞ ವೈದ್ಯರಾದ ಡಾ.ಅಮಿತ್ ರಾಜ್ ಪ್ರೊಟೀನ್ ಕಿಟ್ ವಿತರಿಸುತ್ತಿರುವುದು

ಇನ್ನು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಿಬ್ಬಂದಿಗಳು ಕೂಡ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಸೇವೆಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ತನ್ನ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇಂತಹ ಕಾರ್ಯಕ್ರಮಗಳು ರೋಗಿಗಳಿಗೆ ಆತ್ಮವಿಶ್ವಾಸವನ್ನು ನೀಡುತ್ತವೆ ಮತ್ತು ಉತ್ತಮ ಚಿಕಿತ್ಸೆಗೆ ಉತ್ತೇಜನವನ್ನು ನೀಡುತ್ತವೆ.

ಇದು ಪೌಷ್ಠಿಕತೆಯ ಮೂಲಕ ಆರೋಗ್ಯವನ್ನು ಬಲಪಡಿಸಲು ಮತ್ತು ಚಿಕಿತ್ಸೆ ಫಲಕಾರಿತೆಯನ್ನು ಹೆಚ್ಚಿಸಲು ಹಾದಿ ತೋರಿಸುವ ಉದಾಹರಣೆಯಾಗಿದೆ.

Leave a Reply

Your email address will not be published. Required fields are marked *